- ಪರಿಚಯ
- ಮುಖ್ಯಸ್ಥರು
- ಪದವಿಗಳು
- ಪ್ರಾಧ್ಯಾಪಕರ
- ಸಂಶೋಧನೆ
- ಕಾರ್ಯಕ್ರಮಗಳು
- ಫೋಟೋ ಗ್ಯಾಲರಿ
-
ಪ್ರಸ್ತುತ ಮತ್ತು ಭವಿಷ್ಯದ ಸಾಮಾಜಿಕ ಮತ್ತು ಸಂಶೋಧನಾ ಸಮಸ್ಯೆಗಳ ಅಗತ್ಯಗಳನ್ನು ಪೂರೈಸಲು ಕಂಪ್ಯೂಟರ್ ಸೈನ್ಸ್ ಕ್ಷೇತ್ರದಲ್ಲಿ ಪ್ರತಿಭಾನ್ವಿತ ಮತ್ತು ನುರಿತ ವ್ಯಕ್ತಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ, ಕುವೆಂಪು ವಿಶ್ವವಿದ್ಯಾಲಯವು ಎಂ.ಸಿ.ಎ. (ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್) ಕೋರ್ಸನ್ನು 2000 ರಲ್ಲಿ ಹಾಗೂ ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್ ಕೋರ್ಸನ್ನು 2002 ರಲ್ಲಿ ಆರಂಭಿಸಿತು. ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್ ಕೋರ್ಸ್ UGC ಇಂದ ಮತ್ತು ಎಂ.ಸಿ.ಎ. ಕೋರ್ಸ್ AICTE ಸಂಸ್ಥೆಯಿಂದ ಮಾನ್ಯತೆಯನ್ನು ಪಡೆದಿರುತ್ತವೆ. ಈ ಕೋರ್ಸಗಳು ಆಧುನಿಕ ತಂತ್ರಜ್ಞಾನಗಳನ್ನು ಕುರಿತ ಹಾಗೂ ಸಂಶೋಧನೆಗೆ ಪೂರಕವಾಗುವ ಪಠ್ಯಕ್ರಮವನ್ನು ಹೊಂದಿವೆ. ಈ ವಿಭಾಗವು ಉತ್ತಮವಾದ ಮತ್ತು ನುರಿತ ಉಪನ್ಯಾಸಕ ವೃಂದವನ್ನು ಹೊಂದಿದೆ. LCD ಮತ್ತು Overhead Projector ಗಳಂತಹ ಆಧುನಿಕ ಭೋಧನ ಸಾಧನಗಳನ್ನು ಹೊಂದಿರುವ ಕೊಠಡಿಗಳು ಮತ್ತು ಆಧುನಿಕ ಕಾರ್ಯತಂತ್ರಗಳನ್ನು ಒಳಗೊಂಡಿರುವ ಪ್ರಯೋಗಾಲಯಗಳಿವೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲು ವಿಭಾಗದಲ್ಲಿ ಪ್ರತ್ಯೇಕ ಗ್ರಂಥಾಲಯವಿದೆ.
ವಿಭಾಗವು ಪ್ರಖ್ಯಾತ ಬಹುರಾಷ್ಟ್ರೀಯ ಕಂಪೆನಿಗಳಿಂದ (MNCs) ಮತ್ತು ಅಕಾಡೆಮಿಕ್ ಸಂಸ್ಥೆಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಅತ್ಯಾಧುನಿಕ ಸಾಫ್ಟ್ವೇರ್ ತಂತ್ರಜ್ಞಾನದ ಬಗ್ಗೆ ಹಾಗೂ ಕೌಶಲ್ಯಗಳನ್ನು ಉತ್ತಮಗೊಳಿಸಲು ಸಹಕಾರಿಯಾಗುವಂತೆ ವಿವಿಧ ಕಾರ್ಯಾಗಾರಗಳನ್ನು, ವಿಚಾರಗೋಷ್ಠಿಗಳನ್ನು, ಸಮ್ಮೇಳನಗಳನ್ನು, ಮತ್ತು ವಿಶೇಷ ಉಪನ್ಯಾಸ ಸರಣಿಗಳನ್ನು ಆಯೋಜಿಸುತ್ತದೆ. ವಿಭಾಗದ ಉಪನ್ಯಾಸಕರು ಸಹ ವಿವಿಧ ಕಾರ್ಯಾಗಾರಗಳು, ಸಮ್ಮೇಳನಗಳು, ಸೆಮಿನಾರ್ ಗಳು, ರಿಫ್ರೆಶ್ ಕೋರ್ಸ್ಗಳು, ಓರಿಯಂಟೇಶನ್ ಕೋರ್ಸುಗಳು ಮತ್ತು ತರಬೇತಿ ಕಾರ್ಯಕ್ರಮಗಳಿಗೆ ಹಾಜರಾಗುವುದರ ಮೂಲಕ ತಮ್ಮ ಜ್ಞಾನವನ್ನು ಉನ್ನತೀಕರಿಸಿಕೊಳ್ಳುತ್ತಿದ್ದಾರೆ. ವಿಭಾಗವು ಕಳೆದ ಐದು ವರ್ಷಗಳಲ್ಲಿ ಮೂರು ರಾಷ್ಟ್ರೀಯ ಕಾರ್ಯಾಗಾರಗಳನ್ನು ಮತ್ತು ಒಂದು ರಾಷ್ಟ್ರೀಯ ಸೆಮಿನಾರ್ ಅನ್ನು ಏರ್ಪಡಿಸಿದೆ. ವಿಭಾಗವು ಸ್ನಾತಕೋತ್ತರ ಪದವಿಯ ಜೊತೆಯಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ Ph. D. ಪದವಿಯನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಪ್ರಸ್ತುತ, ವಿಭಾಗವು ಡಿಜಿಟಲ್ ಇಮೇಜ್ ಪ್ರೊಸೆಸಿಂಗ್, ಪ್ಯಾಟರ್ನ್ ರೆಕಗ್ನಿಷನ್ ಮತ್ತು ಡಾಟಾ ಮೈನಿಂಗ್ ಕ್ಷೇತ್ರಗಳಲ್ಲಿನ ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ವಿಭಾಗವು ಕಳೆದ ಐದು ವರ್ಷಗಳಲ್ಲಿ 15 ಕ್ಕಿಂತಲೂ ಹೆಚ್ಚು Ph. D. ಪದವಿಗಳನ್ನು ನೀಡಿದೆ ಮತ್ತು ವಿಭಾಗವು ಪ್ರಖ್ಯಾತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪೀರ್ ವಿಮರ್ಶೆ ನಿಯತಕಾಲಿಕೆಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದೆ. ವಿಭಾಗದ ವಿದ್ಯಾರ್ಥಿಗಳು ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಸಾಫ್ಟ್ವೇರ್ ಉದ್ಯಮಗಳಲ್ಲಿ ಕಾರ್ಯ ನಿರ್ವಯಿಸುತ್ತಿದ್ದಾರೆ. ವಿಭಾಗದ ಹಳೆಯ ವಿದ್ಯಾರ್ಥಿಗಳು ಸಕ್ರಿಯರಾಗಿದ್ದಾರೆ ಹಾಗೂ ಅವರು ವಿಭಾಗಕ್ಕೆ ಭೇಟಿ ನೀಡಿ ತಮ್ಮ ಅನುಭವಗಳನ್ನು ವಿಭಾಗದ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ಮಾರ್ಗದರ್ಶನ ನೀಡುತ್ತಿದ್ದಾರೆ. ದೂರದೃಷ್ಟಿ, ಗುರಿ ಮತ್ತು ಉದ್ದೇಶಗಳು:
ದೂರದೃಷ್ಟಿ ತಂತ್ರಜ್ಞಾನ ಮತ್ತು ಪ್ರಾಯೋಗಿಕ ಆಧಾರಿತ ಶಿಕ್ಷಣ ಮತ್ತು ತರಬೇತಿ ಒದಗಿಸುವುದು
ಗುರಿ ಪ್ರಾಯೋಗಿಕ ಜ್ಞಾನವನ್ನು ಬೆಳೆಸಲು ಬೋಧನೆ, ಕಲಿಕೆ ಮತ್ತು ಸಂಶೋಧನೆಯಲ್ಲಿ ಸೃಜನಶೀಲತೆ ಗುಣಮಟ್ಟದ ಶಿಕ್ಷಣದೊಂದಿಗೆ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಿವುದು
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಉತ್ತೇಜಿಸಿವುದು
ವಿದ್ಯಾರ್ಥಿಗಳಿಗೆ ಪ್ರಚಲಿತ ನವೀನ ತಾಂತ್ರಿಕ ಶಿಕ್ಷಣವನ್ನು ಒದಗಿಸುವುದು
ವಿದ್ಯಾರ್ಥಿಗಳ ಸಾಮಾಜಿಕ, ಬೌದ್ಧಿಕ, ಸೌಂದರ್ಯ ಮತ್ತು ನೈತಿಕ ಮೌಲ್ಯಗಳನ್ನು ಅಭಿವೃದ್ಧಿಪಡಿಸುವುದು ಉದ್ದೇಶಗಳು
ಐಟಿ ಉದ್ಯಮ ಮತ್ತು ಸಂಶೋಧನಾ ಸಂಸ್ಥೆಗಳ ನಡುವಿನ ವಿಭಾಗದ ಸಂಬಂಧವನ್ನು ಬಲಗೊಳಿಸಲು
ಜ್ಞಾನವನ್ನು ನವೀಕರಿಸಲು ವಿಚಾರಗೋಷ್ಠಿಗಳು, ಸಮ್ಮೇಳನಗಳು, ಕಾರ್ಯಾಗಾರಗಳು, ಮತ್ತು ತರಬೇತಿಗಳನ್ನು ಆಯೋಜಿಸುವುದು
ಶಾಲಾ ಶಿಕ್ಷಕರಿಗೆ ಮತ್ತು ಶಾಲಾ ಮಕ್ಕಳಿಗೆ, ರೈತರಿಗೆ, ಗ್ರಾಮ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಸದಸ್ಯರಿಗೆ ಕಂಪ್ಯೂಟರ್ ತರಬೇತಿ ಕಾರ್ಯಕ್ರಮಗಳನ್ನು (IT ಆಧಾರಿತ) ನಡೆಸುವ ಮೂಲಕ ವಿಭಾಗ ಮತ್ತು ಸಮಾಜದ ನಡುವಿನ ಸಂಬಂದವನನ್ನು ಬಲಪಡಿಸಲು
UGC, NRB, DST, AICTE ಮತ್ತು ಇತರ ವಿವಿಧ ಹಣಕಾಸು ಸಂಸ್ಥೆಗಳಿಂದ ಸಂಶೋಧನೆ ಯೋಜನೆಗಳನ್ನು ಪಡೆಯಲು
ರಿಯಲ್ ಟೈಮ್ ಪ್ರಾಜೆಕ್ಟ್ಗಳನ್ನು ನಿರ್ವಹಿಸಲು ಪ್ರತ್ಯೇಕ ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಲು.
ಕ್ಯಾಂಪಸ್ ಸಂದರ್ಶನಗಳನ್ನು ನಿಯಮಿತವಾಗಿ ನಡೆಸಲು ಪ್ರಖ್ಯಾತ ಐಟಿ ಕಂಪನಿಗಳನ್ನು ಆಹ್ವಾನಿಸುವುದು
ಕೈಗಾರಿಕೆಗಳೊಂದಿಗೆ ಒಪ್ಪಂದ (MOU)
ಉಪನ್ಯಾಸಕರ ವಿದೇಶ ಪ್ರವಾಸ:
ಎ) ಡಾ. ಪ್ರಭಾಕರ್ ಸಿ. ಜೆ. : ಅಕ್ಟೋಬರ್ 2008 ರಲ್ಲಿ ಫ್ರಾನ್ಸ್ ನ ಜುವಾನ್-ಲೆಸ್-ಪಿನ್ಸ್ ನಲ್ಲಿ ನಡೆದ ಅಡ್ವಾನ್ಸ್ದ್ ಕಾನ್ಸೆಪ್ಟ್ಸ್ ಫಾರ್ ಇಂಟೆಲಿಜೆಂಟ್ ವಿಷನ್ ಸಿಸ್ಟಮ್ಸ್ (ACIVS-08) ಎಂಬ ಇಂಟರ್ನ್ಯಾಶನಲ್ ಕಾನ್ಫರೆನ್ಸ್ ನಲ್ಲಿ ಸಂಶೋಧನಾ ಪತ್ರಿಕೆಯನ್ನು ಪ್ರಸ್ತುತಪಡಿಸಲು ಫ್ರಾನ್ಸ್ ಗೆ ಭೇಟಿ ನೀಡಿದ್ದರು.
ಬಿ) ಡಾ. ರವಿಕುಮಾರ್ ಎಂ.: ಸಿಐಎಸ್ಐಎಸ್ 15 ಎಂಟನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ “Analysis and Automation of Handwritten Word Level Script Identification” ಎಂಬ ಲೇಖನವನ್ನು ಪ್ರಸ್ತುತಪಡಿಸಲು 2015 ರ ಜೂನ್ ವೇಳೆಗೆ GICAP ರಿಸರ್ಚ್ ಗ್ರೂಪ್ ಯುನಿವರ್ಸಿಟಿ, ಬರ್ಗೊಸ್, ಸ್ಪೇನ್ ಗೆ ಭೇಟಿ ನೀಡಿದ್ದರು.
ಸಿ) ಡಾ. ಸುರೇಶಾ ಎಂ.: .: N&N ಗ್ಲೋಬಲ್ ಟೆಕ್ನಾಲಜಿ ಫಾರ್ ಕಂಪ್ಯೂಟರ್ ಮತ್ತು ಇನ್ಫರ್ಮೇಷನ್ ಸರ್ವೀಸ್, ದುಬೈ, UAE ನಲ್ಲಿ ಆಗಸ್ಟ್ 2015 ರಲ್ಲಿ ನಡೆದ ಕಮ್ಯುನಿಕೇಶನ್, ಇನ್ಫರ್ಮೇಷನ್ ಟೆಕ್ನಾಲಜಿ, ಮತ್ತು ರೊಬೊಟಿಕ್ಸ್ 2015 ರ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ “Symbolic Representation of Texture Features for Identification of Disease in Arecanut” ಎಂಬ ಶೀರ್ಷಿಕೆಯ ಸಂಶೋಧನಾ ಪತ್ರಿಕೆಯನ್ನು ಪ್ರಸ್ತುತಪಡಿಸಲು ಭೇಟಿ ನೀಡಿದ್ದರು.
ವಿಭಾಗದ ಸೌಲಭ್ಯಗಳು
ಮೂರು ಸುಸಜ್ಜಿತ ಮತ್ತು ಸ್ಮಾರ್ಟ್ ಬೋರ್ಡ್ಗಳುಳ್ಳ ಡಿಜಿಟೈಸ್ಡ್ ಉಪನ್ಯಾಸ ಕೊಠಡಿಗಳು
ಸ್ಮಾರ್ಟ್ ಬೋರ್ಡ್ ಹೊಂದಿರುವ ಸುಸಜ್ಜಿತ ಸಭಾಂಗಣ
ಮೂರು ಕಂಪ್ಯೂಟರ್ ಪ್ರಯೋಗಾಲಯಗಳು ಮತ್ತು ಒಂದು ಸಂಶೋಧನಾ ಪ್ರಯೋಗಾಲಯ
ವಿಭಾಗದ ಗ್ರಂಥಾಲಯ
ವಿಭಾಗದ ಎಲ್ಲಾ ಕಂಪ್ಯೂಟರ್ಗಳು 1GBPS ಸಾಮರ್ಥ್ಯವಿರುವ NKN ಅಂತರ್ಜಾಲದ ಮೂಲಕ ವಿಶ್ವವಿದ್ಯಾನಿಲಯದ Campus Network ಗೆ ಸಂಪರ್ಕ ಹೊಂದಿವೆ
ಮೂರು LCD Projectors, ಮೂರು Printers ಮತ್ತು ಎರಡು Scanner ಗಳಿವೆ
05 KVA ಸಾಮರ್ಥ್ಯವಿರುವ 04 ಯುಪಿಎಸ್
ಒಂದು ಕಾಪಿಯರ್ ಯಂತ್ರ
ಕಂಪ್ಯುಟೇಷನಲ್ ಸೌಲಭ್ಯಗಳು
ಎಂ.ಸಿ.ಎ. ಮತ್ತು ಎಂ.ಎಸ್ಸಿ.(CS) ಲ್ಯಾಬ್ನಲ್ಲಿ 57 ಕಂಪ್ಯೂಟರ್ ಗಳು ವಿತ್ ಕಾನ್ಫಿಗರೇಷನ್: DELL i7 - 6700 CPU 3GHz ಸ್ಪೀಡ್, 8 GB RAM, 1TB HDD, DVD R / W
HP ಟವರ್ ಸರ್ವರ್ : ಕೋರ್ i5 ಪ್ರೊಸೆಸರ್, 2 GB RAM ಮತ್ತು 1 TB ಹಾರ್ಡ್ ಡಿಸ್ಕ್
ಎರಡು ವಾಟರ್ ಪ್ರೂಫ್ ಕ್ಯಾನನ್ ಕ್ಯಾಮೆರಾಗಳು
ಸಂಶೋಧನಾ ಲ್ಯಾಬ್ನಲ್ಲಿ ಎಂಟು ಉತ್ತಮ ಕಾನ್ಫಿಗರೇಷನ್ ಉಳ್ಳ ಕಂಪ್ಯೂಟರ್ ಗಳು
ಆರು ಡೆಲ್ ಲ್ಯಾಪ್ಟಾಪ್ಗಳನ್ನು ಉಪನ್ಯಾಸಕರಿಗೆ ನೀಡಲಾಗಿದೆವಿಭಾಗದ ಹೆಸರು ಕಂಪ್ಯೂಟರ್ ಅಪ್ಲಿಕೇಷನ ಸ್ನಾತಕೋತ್ತರ ವಿಭಾಗ(ಎಂ ಸಿ ಎ) ಸ್ಥಾಪನೆಯ ವರ್ಷ 2000 ಅಧ್ಯಕ್ಷರ ಹೆಸರು ವಿಭಾಗದ ವಿಳಾಸ ಕಂಪ್ಯೂಟರ್ ಅಪ್ಲಿಕೇಷನ ಸ್ನಾತಕೋತ್ತರ ವಿಭಾಗ(ಎಂ ಸಿ ಎ)!-- & Research in Kannada-->
ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ , ಶಂಕರಘಟ್ಟ 577451
ಶಿವಮೊಗ್ಗ ಜಿಲ್ಲೆ., ಕರ್ನಾಟಕ ರಾಜ್ಯ, ಭಾರತ
Phone: +91(0)8282-256326, 257107 Fax: 08282-256255
e-mail: mca@kuvempu.ac.inProgrammes Nature & Duration Eligibility Intake M.A. CBCS- Semester Scheme Two Years B.A. Degree with Kannada major subject 49 Ph.D. Five Years
M.A., in Kannada 5 students per Lecturer Syllabus Sl.No. Name Qualification Designation Area of Specialisation Research Projects Sl.No. Title Funding Agency Principal Investigator Co-Investigator Amount Status Research Scholars Sl.No. Faculty Name of the Supervisor Name of the Ph.D. Scholar with Aadhaar number/Photo ID Mode of Ph.D. Registration Number Date of Registration Research Topic Likely date of completion of Ph.D Availing Fellowship Funding Agency of Fellowship Title Level Year Funding Agency Seminar on Moodalapaya Yakshagana Samavesha Hagu Modalapaya Yakshagana Pradarshana National 2006 University Seminar on Suvarna Karnataka : Land, Language, Literature and Culture National 2007 University Seminar on Sillekyatara Beteya Vidhanagalu Local 2007 University