ಉರ್ದು ಸ್ನಾತಕೊತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ಉರ್ದು ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗವನ್ನು ಡಿಸಂಬರ್ 1993 ರಲ್ಲಿ ಪ್ರಾರಂಭಿಸಲಾಯಿತು. ಬೋಧನೆ ಮತ್ತು ಸಂಶೋಧನೆ ವಿಭಾಗದ ಮುಖ್ಯ ಉದ್ದೇಶಗಳಾಗಿವೆ. ಈ ವಿಭಾಗದ 17 ಕ್ಕು ಹೆಚ್ಚು ವಿದ್ಯಾರ್ಥಿಗಳು ಎನ್ ಇ ಟಿ ಮತ್ತು ಎಸ್ ಎಲ್ ಇ ಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ವಿಭಾಗವು ನಾಲ್ಕು ಚಿನ್ನದ ಪದಕಗಳನ್ನು ಸ್ಥಾಪಿಸಿದೆ. ಎಂ.ಎ ಪ್ರಥಮ ವರ್ಷದಲ್ಲಿ ಹೆಚ್ಚಿನ ಅಂಕಗಳಿಗೆ ಒಂದು, ಪರ್ಷಿಯನ್ ಭಾಷೆಗೆ ಒಂದು, ಅರೆಬಿಕ್ ಭಾಷೆಗೆ ಒಂದು ಹಾಗು ಎಂ.ಎ ಉರ್ದು ಪ್ರಥಮ ಮತ್ತು ಅಂತಿಮ ವರ್ಷದ ಎಲ್ಲಾ ವಿಷಯಗಳಲ್ಲಿ ಹೆಚ್ಚಿನ ಶೇಕಡವಾರು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡುತ್ತಾಬಂದಿದೆ. ವಿಭಾಗದಿಂದ ನಿರ್ವಹಿಸಲ್ಪಟಿರುವ ವಿಭಾಗೀಯ ಗ್ರಂಥಾಲಯದಲ್ಲಿ ಸುಮಾರು 1200 ಪುಸ್ತಕಗಳು ಮತ್ತು 200 ಹೆಸರಾಂತ ಜರ್ನಲ್ ನಿಯತಕಾಲಿಕೆಗಳು ಲಭ್ಯವಿದೆ. ವರ್ಷವಿಡೀ ವಿದ್ಯಾರ್ಥಿಗಳು ಈ ಪುಸ್ತಕಗಳಿಂದ ಪ್ರಯೋಜನೆ ಪಡೆಯುತ್ತಿದ್ದಾರೆ. . ವಿಭಾಗದ ಸಂಶೋಧನಾರ್ಥಿಗಳು ಕೂಡ ಈ ಗ್ರಂಥಲಯದಿಂದ ಫಲಾನುಭವಿಗಳಾಗಿರುತ್ತಾರೆ. ವಿಭಾಗವು ನಿರಂತರವಾಗಿ ಬಹುಭಾಷ ಕವಿಗೋಷ್ಠಿಗಳನ್ನು (ಮುಷಾಯರ) ನಡೆಸುತ್ತಿದೆ. ಉರ್ದು ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ ಎ ಎಸ್ , ಕೆ ಇ ಎಸ್, ಐ ಎ ಎಸ್ , ಎನ್ ಇ ಟಿ, ಎಸ್ ಎಲ್ ಇ ಟಿ ಮುಂತಾದವುಗಳಿಗೆ ತರಬೇತಿ ತರಗತಿಗಳನ್ನು ನಡೆಸಲಾಗುುತ್ತಿದೆ.
ಅಧ್ಯಕ್ಷರು
ಡಾ ಸೈಯದ್ ಸನಾವುಲ್ಲಾ
ಸ್ಥಾಪನೆಯ ವರ್ಷ
1993
ವಿಳಾಸ
ಉರ್ದು ಸ್ನಾತಕೊತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಕುವೆಂಪು ವಿಶ್ವವಿದ್ಯಾಲಯ,
ಜ್ಞಾನಸಹ್ಯಾದ್ರಿ, ಶಂಕರಘಟ್ಟ - 577451,
ಶಿವಮೊಗ್ಗ ಜಿಲ್ಲೆ, ಕರ್ನಾಟಕ, ಭಾರತ Urdu@kuvempu.ac.in
ಅಧ್ಯಾಪಕರುಗಳ ಮಾಹಿತಿ
ಸಂಶೋಧನಾ ಯೋಜನೆಗಳು
Sl No | Title | Funding Agency | Principal Investigator | Co-Investigator | Amount | Status |
---|
Sl No | Faculty | Name of the Supervisor | Name of the Ph.D. Scholar with Aadhaar number/Photo ID | Mode of Ph.D. | Registration Number | Date of Registration | Research Topic | Likely date of completion of Ph.D | Availing Fellowship | Funding Agency of Fellowship |
---|